ವಿಭಾಗಗಳು, ಅಂಕಗಳು ಮತ್ತು ಉತ್ತರ ಸೂಚಿಯೊಂದಿಗೆ ಅಚ್ಚುಕಟ್ಟಾದ ಪ್ರಶ್ನೆಪತ್ರಿಕೆ ಮಾಡಿ, A4 ನಲ್ಲಿ ಮುದ್ರಿಸಿ ಅಥವಾ PDF ಆಗಿ ಸೇವ್ ಮಾಡಿ. ಪ್ರಶ್ನೆಗಳನ್ನು ಯಾವ ಭಾಷೆಯಲ್ಲಾದರೂ ಬರೆಯಬಹುದು. ಯಾವುದೂ ನಿಮ್ಮ ಸಾಧನದಿಂದ ಹೊರಗೆ ಹೋಗುವುದಿಲ್ಲ.
ಇದು ಮಾದರಿ ಪ್ರಶ್ನೆಪತ್ರಿಕೆ. ಏನನ್ನಾದರೂ ಬದಲಿಸಿ, ಅಥವಾ ಕೆಳಗಿನಿಂದ ಖಾಲಿ ಪ್ರಶ್ನೆಪತ್ರಿಕೆ ಶುರುಮಾಡಿ.
ಪ್ರಶ್ನೆಪತ್ರಿಕೆಯ ಶೀರ್ಷಿಕೆ
ಸಾಮಾನ್ಯ ಸೂಚನೆಗಳು
ಪ್ರಿಂಟ್ ವಿಂಡೋದಲ್ಲಿ A4 ಕಾಗದ ಆಯ್ಕೆ ಮಾಡಿ. PDF ಬೇಕಿದ್ದರೆ ಪ್ರಿಂಟರ್ ಬದಲು Save as PDF ಆಯ್ಕೆ ಮಾಡಿ.
- ಮೊದಲು ಶೀರ್ಷಿಕೆ ತುಂಬಿ, ನಂತರ ವಿಭಾಗಗಳನ್ನು ಸೇರಿಸಿ. ಪ್ರತಿ ವಿಭಾಗದಲ್ಲಿ ಒಂದು ಪ್ರಶ್ನೆಯ ಅಂಕಗಳನ್ನು ನಿಗದಿ ಮಾಡಿ, + ಬಟನ್ಗಳಿಂದ ಪ್ರಶ್ನೆಗಳನ್ನು ಸೇರಿಸಿ.
- ಆ್ಯಪ್ ತಾನೇ ಪ್ರಶ್ನೆಗಳಿಗೆ ಸಂಖ್ಯೆ ಕೊಟ್ಟು ಅಂಕಗಳನ್ನು ಕೂಡಿಸುತ್ತದೆ. ಒಟ್ಟು ಅಂಕಗಳು ಗರಿಷ್ಠ ಅಂಕಗಳಿಗೆ ಸರಿಯಾದಾಗ ಪೆಟ್ಟಿಗೆ ಹಸಿರಾಗುತ್ತದೆ.
- ಆ್ಯಪ್ ಯಾವ ಭಾಷೆಯಲ್ಲಿದ್ದರೂ ಪ್ರಶ್ನೆಗಳನ್ನು ಯಾವ ಭಾಷೆಯಲ್ಲಾದರೂ ಬರೆಯಬಹುದು. ಸಮಯ, ವಿಭಾಗ ಮುಂತಾದ ಪದಗಳನ್ನು ಪ್ರಶ್ನೆಪತ್ರಿಕೆಯ ಭಾಷೆಯಲ್ಲಿ ಮುದ್ರಿಸಲು ಮುದ್ರಿಸುವ ಪದಗಳ ಭಾಷೆಯನ್ನು ಬದಲಿಸಿ.
- ಪ್ರಶ್ನೆಪತ್ರಿಕೆಯನ್ನು ಫೈಲ್ ಆಗಿ ಸೇವ್ ಮಾಡಿ ಇಟ್ಟುಕೊಳ್ಳಬಹುದು ಅಥವಾ ಇನ್ನೊಬ್ಬ ಶಿಕ್ಷಕರಿಗೆ ಕಳುಹಿಸಬಹುದು. ಅವರು ಅದನ್ನು ಇಲ್ಲಿ ತೆರೆದು ಬದಲಿಸಬಹುದು. ಮುಂದಿನ ವರ್ಷ ಫೈಲ್ ತೆರೆದು ಕೆಲವು ಪ್ರಶ್ನೆಗಳನ್ನು ಬದಲಿಸಿ.
- ತರಗತಿಗೆ ಯೋಚನೆ: ವಿದ್ಯಾರ್ಥಿಗಳ ಗುಂಪುಗಳು ಒಂದು ಪಾಠದ ಮೇಲೆ ಚಿಕ್ಕ ಪ್ರಶ್ನೆಪತ್ರಿಕೆ ಮಾಡಿ, ಇನ್ನೊಂದು ಗುಂಪಿನೊಂದಿಗೆ ಬದಲಾಯಿಸಿಕೊಂಡು, ನಂತರ ಉತ್ತರ ಸೂಚಿಯಿಂದ ಉತ್ತರಗಳನ್ನು ಪರೀಕ್ಷಿಸಲಿ.